Tuesday, October 03, 2006

ಧೀರ ದೊರೆ ಆರನೇ ವಿಕ್ಕರಮಾದಿತ್ತಯ(ಕಿ.ಶ ೧೦೭೬-೧೧೨೬)

ಆರನೇ ವಿಕ್ಕರಮಾದಿತ್ತಯ(ಕಿ.ಶ ೧೦೭೬-೧೧೨೬) :-
ಆರನೇ ವಿಕ್ಕರಮಾದಿತ್ತಯನು ಒಬ್ಬ ಬುದ್ದಿವಂತ ದೊರೆ ಅಲ್ಲದೇ ಧೀರ ಮತ್ತು ಬಲಶಾಲಿಯಾಗಿದ್ದನು. ಆತನಿಗೆ ದೊರೆತನಕ್ಕಿಂತ ಹೆಚ್ಚಾಗಿ ಜನರ ಮನಸ್ಸನ್ನು ಗೆಲ್ಲವುದು ಮುಕ್ಕೆಯಾಗಿತ್ತು. ಆತನು ಒಂದು ಹೊಸ ಶಕೆಯನ್ನು ಆರಂಬಿಸಿದನು. ಅವನಿಗೆ ಪರಮಾದಿದೇವ ಮತ್ತು ತ್ರಿಬುವನಮಲ್ಲ ಎಂಬ ಬಿರುದುಗಳಿದ್ದವು.
ಅವನ ಆಳುವಿಕೆಯಲ್ಲಿ ಬಿಲ್ಲಣ, ವಿದ್‍ನಾನೇಶವರ ಎಂಬ ಕವಿಗಳಿದ್ದರು. ಅವನ ತಮ್ಮ ಕೀರ್‍ತಿವರ್ಮನು ಗೋವೈದ್ದೆ ಎಂಬ ಹೊತ್ತಿಗೆಯನ್ನು ಬರೆದನು.
ಇಮ್ಮಡಿ ವಿಕ್ಕರಮಾದಿತ್ತಯ (ಕಿ.ಶ ೭೩೩-೭೪೪) :-
ಇಮ್ಮಡಿ ಪುಲಕೇಶಿಯ ಸಾವಿನ ಕಾಲದಲ್ಲಿ ಪಲ್ಲವ ದೊರೆಯು ವಾತಾಪಿಯನ್ನು ಮುತ್ತಿದ್ದರಿಂದ ವಾತಾಪಿಗೆ ಅಂಟಿದ್ದ ಕಳಂಕವನ್ನು ದಿಟ್ಟತನದಿಂದ ತೊಡೆದು ಹಾಕಿದವನು ಎರಡನೇ ವಿಕ್ಕರಮಾದಿತ್ತಯ. ಇಮ್ಮಡಿ ಪುಲಕೇಶಿಗೆ ಬಂದಿದ್ದ ಅವನಿಜನಾಶ್ರಯ ಎಂಬ ಬಿರುದು ಇಮ್ಮಡಿ ವಿಕ್ಕರಮಾದಿತ್ತಯನಿಗೂ ಬಂದಿತು.
ಈತನು ಪಲ್ಲವರನ್ನು ಅನೇಕ ಬಾರಿ ಸೋಲಿಸಿ, ನೆತ್ತರ ಹರಿಸದೇ ಈಗಿನ ತಮಿಳುನಾಡಿನಲ್ಲಿರುವ ಸೋಮೇಶನ ದೇವಾಲಯದ ಗೋಡೆಗಳ ಮೇಲೆ ಕನ್ನಡದಲ್ಲಿ ಶಾಸನಗಳನ್ನು ಬರೆಸಿದನು, ಇಮ್ಮಡಿ ವಿಕ್ಕರಮಾದಿತ್ತಯ.